ಚಿತ್ರ : ಯುಗ ಪುರುಷ
ಸಾಹಿತ್ಯ : ಹಂಸಲೇಖ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಲತಾ, ಹಂಸಲೇಖ
ಸಂಗೀತ: ಹಂಸಲೇಖ
ಕೃಪೆ : ಲಹರಿ ಮ್ಯೂಸಿಕ್
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಜೋಡಿ ಜೋಡಿ ಕಂಗಳಿಗೆ
ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಕೋಟಿ ಮಾತನಾಡಿದರು
ಕೋಟಿ ಮುತ್ತು ನೀಡಿದರು
ತಿರಗುದ ನೋಟದ ಸೆರೆಯಲಿ
ತಿರುಗುವ ಭೂಮಿಯ ಮರೆತರು
ಜನವ ಹಿಂದೇ ದುಡಿದರು
ದಿನವೂ ಒಂದುಗೂಡಿದರು
ತಿಂಗಳ ಬೆಳಕಿನ ತೆರೆಯಲಿ
ಸೂರ್ಯನೇ ಬರುವುದ ಮರೆತರು
ಭಾಷೆಯ ರಾಶಿ ಸುರಿದವು
ಹಣೆಯ ಕೋಟೆ ಮೆರೆದವು
ಪ್ರೇಮ ಪ್ರಣಯದ ಮನೆಯಲಿ
ಬೆರೆತವು
ಜೋಡಿ ಜೋಡಿ ಕಂಗಳಿಗೆ
ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ
ನಾ ಹೇಳೋ ಕಥೆಗೆ ಸ್ಪೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಪ್ರೇಮ ಒಂದು ವರದಾನ
ಅದರ ಹಿಂದೆ ಬಲಿದಾನ
ಎಂಬುದೇ ತಿಳಿಯದ ಹುಡುಗನು
ಹುಡುಗಿಯ ಮದುವೆಯ ಅದನು
ತನ್ನ ಕಣ್ಣ ನೋಟದಲ್ಲಿ
ಕಡಲಿಗಿಂತ ಆಳದಲಿ
ಪ್ರೇಮವ ಕೊಲ್ಲುವ ಚೂರಿಯ
ಕಾಣದೆ ಇಟ್ಟಳು ಮರೆಯಲಿ
ನಿರ್ಮಲ ಪ್ರೇಮದ ಕಣ್ಣಿಗೆ
ಕಲ್ಮಶ ತಿಳಿಯದ ಮನಸಿಗೆ
ಕಾಣದೆ ಹೋಯಿತು ಸಂಚಿನ ಹುಸಿನಗೆ
ಆ ಸಾವಂತೆ ಬಯಲಾಯಿತು
ಈ ಹೆಮ್ಮಾರಿ ವೇಷ
ವೇಷ ವೇಷ ವೇಷ
ಪ್ರೀತಿ ಎಂಬ ಮುಖವಾಡ
ತಾ ಮಾಡಿತ್ತು ಮೋಸ
ಮೋಸ ಮೋಸ ಮೋಸ
ವೇಷ
ಮೋಸ
ವೇಷ
ಮೋಸ
ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು