Keli premigale obbalu sundari eddalu kannada song lyrics | yugapurusha kannada movie song lyrics

 ಚಿತ್ರ : ಯುಗ ಪುರುಷ

ಸಾಹಿತ್ಯ : ಹಂಸಲೇಖ 

ಗಾಯಕರು:  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಲತಾ, ಹಂಸಲೇಖ 

ಸಂಗೀತ:  ಹಂಸಲೇಖ 

ಕೃಪೆ : ಲಹರಿ ಮ್ಯೂಸಿಕ್


ಪ್ರೀತಿ ಕೊಂದ ಕೊಲೆಗಾತಿ 

ನಾ ಹೇಳೋ ಕಥೆಗೆ ಸ್ಪೂರ್ತಿ 


ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು

ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು

ಜೋಡಿ ಜೋಡಿ ಕಂಗಳಿಗೆ 

ಪ್ರೀತಿ ಬಂತು ಪೂರ್ತಿ 

ಪ್ರೀತಿ ಕೊಂದ ಕೊಲೆಗಾತಿ 

ನಾ ಹೇಳೋ ಕಥೆಗೆ ಸ್ಪೂರ್ತಿ

ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು


ಕೋಟಿ ಮಾತನಾಡಿದರು 

ಕೋಟಿ ಮುತ್ತು ನೀಡಿದರು 

ತಿರಗುದ ನೋಟದ ಸೆರೆಯಲಿ 

ತಿರುಗುವ ಭೂಮಿಯ ಮರೆತರು 


ಜನವ ಹಿಂದೇ ದುಡಿದರು 

ದಿನವೂ ಒಂದುಗೂಡಿದರು 

ತಿಂಗಳ ಬೆಳಕಿನ ತೆರೆಯಲಿ 

ಸೂರ್ಯನೇ ಬರುವುದ ಮರೆತರು 

ಭಾಷೆಯ ರಾಶಿ ಸುರಿದವು

ಹಣೆಯ ಕೋಟೆ ಮೆರೆದವು 

ಪ್ರೇಮ ಪ್ರಣಯದ ಮನೆಯಲಿ 

ಬೆರೆತವು


ಜೋಡಿ ಜೋಡಿ ಕಂಗಳಿಗೆ 

ಪ್ರೀತಿ ಬಂತು ಪೂರ್ತಿ 

ಪ್ರೀತಿ ಕೊಂದ ಕೊಲೆಗಾತಿ 

ನಾ ಹೇಳೋ ಕಥೆಗೆ ಸ್ಪೂರ್ತಿ

ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು


ಪ್ರೇಮ  ಒಂದು ವರದಾನ 

ಅದರ ಹಿಂದೆ ಬಲಿದಾನ 

ಎಂಬುದೇ ತಿಳಿಯದ ಹುಡುಗನು 

ಹುಡುಗಿಯ ಮದುವೆಯ ಅದನು

ತನ್ನ ಕಣ್ಣ ನೋಟದಲ್ಲಿ

ಕಡಲಿಗಿಂತ ಆಳದಲಿ

ಪ್ರೇಮವ ಕೊಲ್ಲುವ ಚೂರಿಯ 

ಕಾಣದೆ ಇಟ್ಟಳು ಮರೆಯಲಿ 

ನಿರ್ಮಲ ಪ್ರೇಮದ ಕಣ್ಣಿಗೆ 

ಕಲ್ಮಶ ತಿಳಿಯದ ಮನಸಿಗೆ 

ಕಾಣದೆ ಹೋಯಿತು ಸಂಚಿನ ಹುಸಿನಗೆ 

ಆ ಸಾವಂತೆ ಬಯಲಾಯಿತು 

ಈ ಹೆಮ್ಮಾರಿ ವೇಷ 

ವೇಷ ವೇಷ ವೇಷ 

ಪ್ರೀತಿ ಎಂಬ ಮುಖವಾಡ 

ತಾ ಮಾಡಿತ್ತು ಮೋಸ 

ಮೋಸ ಮೋಸ ಮೋಸ 

ವೇಷ 

ಮೋಸ

ವೇಷ 

ಮೋಸ 

ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು

ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು


saagariye saagariye kannada song lyrics - sagariye sagariye lyrics

ಚಿತ್ರ : ಗಲಾಟೆ ಅಳಿಯಂದ್ರು
ಸಾಹಿತ್ಯ : ಕೆ ಕಲ್ಯಾಣ್
ಗಾಯಕರು:  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರ
ಸಂಗೀತ:  ದೇವಾ

----------------------------------------------------------------------------------------

ಒಹ್ ಹೂ ಒಹ್ ಹೂ...  ಒಹ್ ಹೂ..  ಒಹ್ ಹೂ..
ಒಹ್ ಹೂ ಒಹ್ ಹೂ...  ಒಹ್ ಹೂ..  ಒಹ್ ಹೂ..
ಸಾಗರಿಯೇ....................... ಸಾಗರಿಯೇ..........................
ಒಹ್ ಹೂ... ಒಹ್ ಹೂ...  ಒಹ್ ಹೂ..  ಒಹ್ ಹೂ...
ಸಾಗರಿಯೇ....................... ಸಾಗರಿಯೇ..........................
ಸುಂದರಿಗೂ.................... ಸುಂದರಿಯೇ .......................
ವುವೂ ಹೃದಯ ಕೈ ಬಿಸಿ ಕರೆದಾಯ್ತು.....
ಆಹಾ  ಮನಸ್ಸು ತಿಲನ ಬರೆದಾಯ್ತು..
ಲವ್ಯೂ ಲವ್ಯೂ ಅಂತಾಳೆ ....
ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲ...
ಲವ್ಯೂ ಲವ್ಯೂ ಅಂತಾಳೆ...
ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲ...
ಸಾಗರಿಯೇ....................... ಸಾಗರಿಯೇ...........................

ನಿನ್ನ ಬಯಸಿ ಬಯಸಿ, ನಿನ್ನ ಹೆಜ್ಜೆ ಬಳಸಿ, ನಿನ್ನ ಹೆಸರ ಉಸಿರಿಗಿಡುವೆ..
ನನ್ನ ಉಸಿರ ಎಲ್ಲಾ ಏರಿಳತವನ್ನು.. ನಿನ್ನಗಾಗಿ ಮೀಸಲಿಡುವೆ...
ನಿನ್ನ ಸನಿಹ ಚೆಂದ, ನಿನ್ನ ಸ್ಪರ್ಶ ಚೆಂದ, ನಿನ್ನ ನಗೆಯೇ ನನ್ನ ಬಲವೇ ..
ನನ್ನ ಕನಸೇನಲ್ಲ ನಿನ್ನ ಕಣ್ಣಿಗಿಟ್ಟು ಸೇತುವೆಯಾ ಮಾಡಿಬಿಡುವೆ

ಹುಣ್ಣಿಮೆ.. ಹುಣ್ಣಿಮೆ.. ನಿನಗೆ ನಾ ರೇಶಿಮೆ...
ಮಾತಾಡು ಅಂತಲೇ ಮುದ್ದಾಡು ಅಂತಾಳೆ
ಮಾತು ಮುತ್ತು ಒಂದು ಮಾಡಿ ಲವ್ಯೂ ಲವ್ಯೂ  ಅಂತಾಳೆ..
ಲವ್ಯೂ ಲವ್ಯೂ  ಅಂತಾನೆ..
ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲ
ಲವ್ಯೂ ಲವ್ಯೂ  ಅಂತಾನೆ..
ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲವ್ಯೂ ಲ
ಹುಣ್ಣಿಮೆಯೇ.... ಹುಣ್ಣಿಮೆಯೇ ....
ಒಹ್ ಹೂ ಒಹ್ ಹೂ ... ಒಹ್ ಹೂ  ಒಹ್ ಹೂ...

ನಿನ್ನ ಲಜ್ಜೆಗೊಂದು ಸಂಗೀತದಂತೆ... ನಿನ್ನ ಹೆಜ್ಜೆ ನನ್ನ ತಾಳ...
ನಿನ್ನ ಮೌನ ಒಂದು ಸಾಹಿತ್ಯದಂತೆ.. ಅದೇ ನನ್ನ ಅಂತರಾಳ... 
ನಿನ್ನ ನೆರಳು ಕೂಡ ಸೌಂದರ್ಯ ಲಹರಿ.. ನಿನ್ ನೆನಪೇ ಗಟ್ಟಿಮೇಳ.. ಒಹ್ ಹೂ...
ಮಾತೊಂದು  ಸಾಕು ಈ ಹೃದಯ ಸೋತು ಮರೆಯುವದು ಹಗಲು ಇರುಳು
ಸಾಗರಿ ಸಾಗರಿ ಕಿರು ನಗೆ ಕಿನ್ನರಿ ಹಾಡು ಬಾ ಅಂತಾನೆ ಕೂಡ ಬಾ ಅಂತಾನೆ
 ಹಾಡಿ ಕೂಡಿ ಕೂಡಿ ಕಳೆದು ಲವ್ಯೂ ಲವ್ಯೂ  ಅಂತಾನೆ..

ಸಾಗರಿಯೇ....................... ಸಾಗರಿಯೇ...........................
ಸುಂದರಿಗೂ.................... ಸುಂದರಿಯೇ .......................
ವುವೂ ಚೆಲವು ಚಿತ್ತಾರ ಬರೆದಾಯ್ತು
ಅದರ ಒಳಗೆ ನಾವೀಗ ಬೇರೆದಾಯ್ತು
ಲವ್ಯೂ ಲವ್ಯೂ  ಅಂತಾಳೆ ...
ಲವ್ಯೂ ಲವ್ಯೂ  ಅಂತಾನೆ....






bombe helutaite kannada song lyrics- Raajkumara Kannada movie songs lyrics

ಚಿತ್ರ : ರಾಜಕುಮಾರ
ಸಾಹಿತ್ಯ : ಸಂತೋಷ್  ಆನಂದ್ರಮ್
ಗಾಯಕರು: ವಿಜಯ್ ಪ್ರಕಾಶ್
ಸಂಗೀತ: ವಿ ಹರಿಕೃಷ್ಣ
------------------------------------------------------------------------
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ…
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಧಿಸೋ ರಾಜರತ್ನನು
ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದು ಸೋಲದು ಸೋತು ತಲೆಯ ಬಾಗದು…

ಬೊಂಬೆ ಹೇಳುತೈತೆ,
ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ಗುಡಿಸಲೇ ಆಗಲಿ ಅರಮನೆ ಆಗಲಿ ಆಟವೇ ನಿಲ್ಲದು ,
ಎಂದು ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೇ ಬರಲಿ ಬೇಧವ ತೋರದು ,
ಎಂದು ಬೇಧವ ತೋರದು …
ಎಲ್ಲ ಇದ್ದು ಏನು ಇಲ್ಲದ  ಹಾಗೆ ಬದುಕಿರುವ
ಆಕಾಶ ನೋಡದ  ಕೈಯ್ಯಿ ನಿನದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನು ಪಡೆದ  ನಾವು ಪುನೀತ ಬಾಳು ನಗು ನಗುತ…

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ ನೀನೇ ರಾಜಕುಮಾರ…

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು ,
ನಂದಾ ದೀಪವೇ ಇದು…
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು,
ಸಮಯದ  ಸೂತ್ರ ಅವನದು…
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ  ರಾಜನಂಗೆ  ನೀನು ಬಂದೆ
ಯೋಗವು ಒಮ್ಮೆ ಬರುವುದು  ನಮಗೆ
ಯೋಗ್ಯತೆ ಒಂದೇ ಉಳಿವುದು  ಕೊನೆಗೆ…
ಸೂರ್ಯನೊಬ್ಬ , ಚಂದ್ರನೊಬ್ಬ ರಾಜನು ಒಬ್ಬ,
ಈ ರಾಜನು ಒಬ್ಬ
ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದು ಸೋಲದು ಸೋತು ತಲೆಯ ಬಾಗದು…

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ…

belageddu yara mukava nanu nodide song lyrics - Kirik party Kannada movie song lyrics

  ಚಿತ್ರ : ಕಿರಿಕ್ ಪಾರ್ಟಿ
ಸಾಹಿತ್ಯ :  ಧನಂಜಯ್ ರಂಜನ್
ಗಾಯಕರು: ವಿಜಯ್ ಪ್ರಕಾಶ್, ಶೃತಿ ಪ್ರಶಾಂತ್
ಸಂಗೀತ: ಬಿ ಅಜನೀಶ್ ಲೋಕನಾಥ್
------------------------------------------------------------------------
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನೆನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ ಅರೆ ಅರೆ ರೇ ...
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆ ಅರೆ ರೇ ...
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ
ಪ್ರೀತಿಯಲ್ಲಿ ಹೊಸದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೋ ಪ್ರೀತಿನೇ ಮಜಾನಾ
ಬಿಡದಂತಿರೋ ಬೆಸುಗೆ
ಸೆರೆ ಸಿಕ್ಕಿರೋ ಸಲಿಗೆ
ನಿನ್ನ ಸುತ್ತ ಸುಳಿಯೋ
ಆಸೆಗೀಗ ಆಯಸ್ ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವು
ಕಲ್ಪನೆಗೂ ಮೀರಿದೆ
ಕನಸಲ್ಲಿ ಅರೆ ಅರೆ ರೇ ..
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ ಇನ್ನೊಮ್ಮೆ
ಕನಸಲ್ಲಿ ಅರೆ ಅರೆ ರೇ ..
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಹೊಟ್ಟೆಉರಿ ತಾಳಲಾರೆ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ
ನೆನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ ಅರೆ ಅರೆ ರೇ ...
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯ
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆ ಅರೆ ರೇ ...
ಬಳಿ ಬಂದು ಅಲ್ಲೇ ಲ್ಲೇ ಲ್ಲೇ..
ಮುದ್ದಾಡಿ ಅಯ್ಯಯ್ಯಯ್ಯ
ಕಚಗುಳಿ ತಾಳಲಾರೆ..

Ondandu Sari hingene Kannada Song Lyrics - Srikanta Kannada Movie Songs Lyrics

ಚಿತ್ರ: ಶ್ರೀಕಂಠ
ಸಾಹಿತ್ಯ :  ಕೃಷ್ಣೇಗೌಡ್ರು
ಗಾಯಕರು: ಕಾರ್ತಿಕ್, ಶಿಲ್ಪ ಶ್ರೀಕಾಂತ್
ಸಂಗೀತ: ಬಿ ಅಜನೀಶ್ ಲೋಕನಾಥ್
--------------------------------------------------------------------------------------------
ಒಂದೊಂದ್  ಸಾರಿ  ಹಿಂಗೇನೆ ನೋಡ್  ನೋಡತಾ  ಇದ್ದಂಗೆನೇ  ಆಕಾಶನೇ ಅಂಗೈಮೇಲೆ, ತಂದಿಡ್ತಾನೆ…
ಗಂಡು  ಅಂದ್ರೆ  ಹಿಂಗೇನೆ  ಪ್ರೀತಿ  ಅಂದ್ರೆ  ತಂತಾನೆ  ಬಂಡೆ ಯಾದ್ರು  ಬೆಣ್ಣೆ ಯಂತೆ, ಕರಾಗಹೊಗ್ತಾನೆ…
ನನಗೆ  ಇದೇನಾಯಿತೋ  ಕಾಣೆ  ಮನಸೇ  ಕಳೆದೋಗಿದೆ  ಹೊರಗೆ  ನನ್ನೊಳಗೆಲ್ಲ  ನೀನೆ  ನಿನದೆ  ಜಪವಾಗಿದೆ… ಒಂದೊಂದ್  ಸಾರಿ  ಹಿಂಗೇನೆ ನೋಡ್  ನೋಡತಾ  ಇದ್ದಂಗೆನೇ  ಆಕಾಶನೇ ಅಂಗೈಮೇಲೆ, ತಂದಿಡ್ತಾನೆ…

ಪ್ರೀತಿ ಇಂದಲೇ ತಾನೇ ಆ  ಮೋಡ  ಕರಗಿ  ಮಳೆಯೂ ಸುರಿಯೋದು... ಹೌದ..
ಪ್ರೇಮ  ಇದ್ರೆ ತಾನೇ ಆ  ಕಡಲ  ಕಡೆಗೆ  ಹೊಳೆಯು  ಹರಿಯೋದು...  ಹಂಗ...
ದುಂಬಿ ದಂಡು  ಹೂವ್ವು  ಕಂಡು, ಶರಣಾಗೋದು...
ಈ  ಜಿಂಕೆ  ಗಂಡು  ಹಸಿರ  ಕಂಡು, ಮರುಳಾಗೋದು...
ಬೀಸೋ  ಗಾಳಿಗೆ  ಭಾರಿ  ಮರವೇ  ತಲೆ  ಬಾಗೋದು..
ಈ  ಕಡಲ  ನೀರು  ಕುಣಿದು  ಕುಣಿದು  ಅಲೆಯಾಗೋದು…
ಒಂದೊಂದ್  ಸಾರಿ  ಹಿಂಗೇನೆ ನೋಡ್  ನೋಡತಾ  ಇದ್ದಂಗೆನೇ  ಆಕಾಶನೇ ಅಂಗೈಮೇಲೆ, ತಂದಿಡ್ತಾನೆ…

ಸೂರ್ಯ  ಚಂದ್ರ  ಸಾಕ್ಷಿ  ಒಂದ್  ಸಾವಿರ  ವರ್ಷ  ಹಾಯಾಗಿರ್ತಿನಿ  ಹೌದ…
ನಾ  ಮುದ್ದಿನ  ಮಡದಿಯಾಗಿ  ನಿನ್  ನೂರು  ಮಕ್ಕಳ  ತಾಯಿ -ಆಗಿರ್ತಿನಿ...  ಹಂಗ …
ಜೋಡಿ  ಹಕ್ಕಿ ಆಗಿ  ನಾವು  ಹಾರೋಣ  ಬಾ..  ಈ  ಕಾಮನ  ಬಿಲ್ಲೆ  ಜಾರ  ಗುಂಪೇ, ಜಾರೋಣ  ಬಾ …
ಕಾಡು  ಕಣಿವೆ  ಬೆಟ್ಟ  ಗುಡ್ಡ ಓಡಾಡುವ,  ಈ  ಪ್ರೀತಿಯಲ್ಲೇ  ಮುಳುಗಿ  ಎದ್ದು, ಈಜಾಡುವ…

ಹೆಣ್ಣು ಅಂದ್ರೆ ಹಿಂಗೇನೆ ವಯಸ್ಸಿಗೆ  ಬರ್ತಿದ್ದ ಹಂಗೆನೇ  ಆಕಾಶಕ್ಕೆ  ಏಣಿ  ಹಾಕೋದ್  ಸಹಜ  ತಾನೇ…
ಪ್ರೀತಿ  ಅಂದ್ರೆ ಹಿಂಗೇನೆ  ಎರಡು  ಜೀವ  ಒಂದೇನೆ  ಭೂಮಿ  ತುಂಬಾ ಇನ್ನು  ಮುಂದೆ  ನಾನು  ನೀನೆ…
ನನಗೆ  ಇದೇನಾಯಿತೋ  ಕಾಣೆ  ಮನಸೇ  ಕಳೆದೋಗಿದೆ  ಹೊರಗೆ  ನನ್ನೊಳಗೆಲ್ಲ  ನೀನೆ  ನಿನದೆ ಜಪವಾಗಿದೆ …

Moore Moore Pegage Kannada Song Lyrics - 3 Peg Kannada Rapper Chandan Shetty Lyrics

ಆಲ್ಬಮ್ : ಕನ್ನಡ ರಾಪರ್ ಚಂದನ್ ಶೆಟ್ಟಿ
ಸಾಹಿತ್ಯ :  ಚಂದನ್ ಶೆಟ್ಟಿ
ಗಾಯಕರು: ಚಂದನ್ ಶೆಟ್ಟಿ
ಸಂಗೀತ: ವಿಜೇತ್
-----------------------------------------------------------------------------

ಮೂರೇ ಮೂರು ಪೆಗಿಗೆ ತಲೆ ಗಿರ ಗಿರ ಗಿರ ಗಿರ  ಅಂದಿದೆ
ನನ್ನ ಕಣ್ಣುಗಳು ಬ್ಲೈಂಡ್ ಆಗಿದೆ ಬಾಡಿ ಬ್ಯಾಲೆನ್ಸ್ ತಪ್ಪಿದೆ
ಯಾರೋ ಈ  ಹುಡುಗಿ ಫುಲ್  ಬಾಟಲಿ ಖಾಲಿ ಮಾಡಿದಳೇ
ಅಯ್ಯೋ ಡಾನ್ಸ್ ಮಾಡತವಳೇ ಖಡಕ್ ಸ್ಮೈಲ್  ಕೊಡತವಳೇ
ಬೌನ್ಸರ್ ನಾ ಕೇಳ್ಲಿದಕ್ಕೆ ಕೊಡು ನೀ ಆನ್ಸರ್  ಏಕೆ ಹೇಳು ಈ  ಪಾರ್ಟಿ  ಇಷ್ಟು  ಸೂಪರ್
ಇಲ್ಲಿ  ಎಲ್ಲ ಹುಡುಗೀರು  ಬಾರ್ನ  ಸ್ಟಾರ್ಸ್
ಡಿಸ್ಕೋ  ಲೈಟ್ಸ್  ಅಂಡ್ ಲೇಸೆರ್ಸ್ ನನ್ನ ಮೈಯ  ಮೇಲಿದೇ  ಬ್ಲ್ಯಾಜ್ರ್ಸ್
ಡಿಜೆ  ರೈಸ್  ಸಂ  ಬೇಸ್  ಅಪ್  ಸೊ  ವೀ  ಗೊನ್ನಾ  ಪುಟ್  ಯುವರ್  ಹ್ಯಾಂಡ್ಸ್  ಅಪ್

ಇವ್ಲ್ಯಾನ್  ನೋಡಣ್ಣ  ಎಷ್ಟು ಬೆಳ್ಳಗಾವಲನ್ನ ಯವ್ವ  ಪ್ಯಾಕೆಟ್  ಹಾಡು  ಕುಡೀತಾಳೆ  ಕೇಳಬೇಕಣ್ಣ  ಯಹ್, ನೋಡೋಕೆ  ಸಣ್ಣ  ತುಟಿಗೆ ಹಚ್ಚವಳೇ  ಬಣ್ಣ  ನನ್ನ  ಹಾರ್ಟ್-ಗೆ  ಬುಲೆಟ್  ನಟಾಂಗ್  ಬಿಡ್ತವಳೇ  ಕಣ್ಣ  ಯಹ್ ,
ಬೇಟೆಗೆ  ಹೋಗೋದೇ  ಬೇಡ  ಇಲ್ಲಿ  ಇದೆ  ಶಿಕಾರಿ  ಇವಳ  ಹಿಂದೆ  ಬಿದ್ದ  ಹುಡುಗ  ಪಾಪ  ಪಾರ್ಮನೆಂಟ್  ಬಿಕರಿ, ನಾನ್  ಸೈಕ್  ಅದೇ , ಇಲ್  ಬಂದು  ಸೈಕ್  ಅದೇ , ಇವ್ಳ  ನೋಡಿ  ಸೈಕ್  ಅದೇ  ಒಹ್  ಮೈ  ಗಾಡ್  ಸೋತೋದೆ  ಈ  ಬೇಬಿ  ನೋಡಿ,
ಮೂರೇ ಮೂರು  ಪೆಗ್ಗಿಗೇ  ತಲೆ  ಗಿರ  ಗಿರ  ಗಿರ  ಗಿರ  ಅಂದಿದೆ  ನನ್ನ  ಕಣ್ಣುಗಳು  ಬ್ಲೈಂಡ್  ಆಗಿದೆ  ಬಾಡಿ  ಬ್ಯಾಲೆನ್ಸ್  ತಪ್ಪಿದೆ  ಯಾರೋ  ಈ  ಹುಡುಗಿ  ಫುಲ್  ಬಾಟಲಿ  ಖಾಲಿ  ಮಾಡಿದಳೇ  ಅಯ್ಯೋ  ಡಾನ್ಸ್  ಮಾಡತವಳೇ  ಖಡಕ್  ಸ್ಮೈಲ್  ಕೊಡತವಳೇ  ಬೌನ್ಸರ್  ನಾ  ಕೇಳ್ಲಿದಕ್ಕೆ  ಕೊಡು  ನೀ  ಆನ್ಸರ್  ಏಕೆ  ಹೇಳು  ಈ  ಪಾರ್ಟಿ  ಇಷ್ಟು  ಸೂಪರ್  ಇಲ್ಲಿ  ಎಲ್ಲ ಹುಡುಗೀರು  ಬಾರ್ನ  ಸ್ಟಾರ್ಸ್  ಡಿಸ್ಕೋ  ಲೈಟ್ಸ್  ಅಂಡ್ ಲೇಸೆರ್ಸ್ ನನ್ನ ಮೈಯ  ಮೇಲಿದೇ  ಬ್ಲ್ಯಾಜ್ರ್ಸ್  ಡಿಜೆ  ರೈಸ್  ಸಂ  ಬೇಸ್  ಅಪ್  ಸೊ  ವೀ  ಗೊನ್ನಾ  ಪುಟ್  ಯುವರ್  ಹ್ಯಾಂಡ್ಸ್  ಅಪ್

ಇದು  ಕ್ರೇಜಿ  ಸ್ವಿಮ್ಮಿಂಗ್  ಪೂಲ್  ಬೀಳ್ಳೋರಿಗೆ ಇಲ್ಲ  ರೂಲ್
ಬೇಬಿ  ಮೇಕ್  ದಿ  ಪಾರ್ಟಿ  ಹಾರ್ಡ್  ನಿಂಗೆ  ನಾನೇ  ಬಾಡಿಗಾರ್ಡ್
ಘಂಟೆ  ಹನ್ನೆರಡ್  ಆಗಿದೆ  ವಾಲ್ಯೂಮ್  ಮ್ಯಾಕ್ಸಿಮಮ್  ಇದೆ
ಪಾರ್ಟಿ  ಫುಲ್ಲು  ಜೋರ್  ಇದೆ  ಬೆಂಗಳೂರು  ತುಂಬ  ಕೂಲ್  ಇದೆ  ಚೆಕ್  ಇಟ್  ಅಪ್..
ಉಪರ್ಗೆ  ಹೋಗೋದೇ  ಬೇಡ  ಸ್ವರ್ಗ  ಗು  ನೀಚೆ  ಇದೆ ಸಿಕ್ ಸಿಕ್ಕಿದು  ಕುಡಿದು  ನಾನು  ಟೈಟ್  ಆಗೋದೇ  ವಾಟ್  ಆ  ಪಾರ್ಟಿ  ಲೇಟ  ದಿ  ಪಾರ್ಟಿ  ಗೋ  ಹೂಲ್   ನೈಟ್  ವಾಟ್  ಆ  ಪಾರ್ಟಿ  ಲೇಟ  ದಿ  ಪಾರ್ಟಿ  ಗೋ  ಹೂಲ್   ನೈಟ್  ಹೇಯ  ದಿಸ್  ಐಸ್  ಕನ್ನಡ  ರಾಪರ್  ಚಂದನ್  ಶೆಟ್ಟಿ.....

Saaluthillave Saaluthillave Kannada Song Lyrics | Kotigobba 2 Kannada song lyrics

ಚಿತ್ರ: ಕೋಟಿಗೊಬ್ಬ 2
ಸಾಹಿತ್ಯ : ವಿ ನಾಗೇಂದ್ರ ಪ್ರಸಾದ್
ಗಾಯಕರು: ಶ್ರೇಯ ಘೋಷಾಲ್, ವಿಜಯ್ ಪ್ರಕಾಶ್
ಸಂಗೀತ: ಡಿ ಇಮ್ಮನ್
-----------------------------------------------------------------------------------

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ  ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಒಂದೇ ಸಮನೆ ನಿನ್ನ ನಾ ನೋಡುತಿದ್ದ  ಮೇಲು
ತುಂಬ  ಸಲುಗೆಯಿಂದ ಆ  ಬೆರೆತು  ಹೋದ  ಮೇಲು
ಪಕ್ಕದಲ್ಲಿ ಕುಳಿತುಕೊಂಡು
ನಿನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸದ ಮೇಲು...

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ...
ಸಾಲುತಿಲ್ಲವೇ  ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ...

ಮುಂಜಾನೆ ನನ್ನ ಪಾಲಿಗಂತೂ.. ಸಾಲೋಲ್ಲ
ಮುಸ್ಸಂಜೆ ತನಕ ಸನೀಹವಂತೂ.. ಸಾಲೋಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಲೆವೇ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲ ಭೇಟಿ ನೆನದ ಮೇಲು....
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ...

ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ
ಸಲ್ಲಾಪದಲ್ಲೂ ಇರುವ ಸುಖವು ಸಾಲೋಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವು ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೋಲ್ಲ
ಏಳು ಸ್ವರವು ಮುಗಿದ ಮೇಲು
ಕಾಡುವಂಥ ನನ್ನ ನಿನ್ನ
ಯುಗಳ ಗೀತೆ ಮುಗಿಯೋದಿಲ್ಲ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಶ್ವಾಶಧಲ್ಲಿ ನೀನು ವಾಸವಿದ್ಧ  ಮೇಲು
ನನ್ನ ಹೃದಯ ಹಾಯಾಗಿ  ಕದ್ದ  ಮೇಲು
ಎರಡು  ಹೃದಯವನ್ನು ಬೆರೆತ ಮೇಲು
ಹಾಡು  ಮುಗಿದ್ದು  ಹೋದ ಮೇಲು
ಮೌನ ತುಂಬಿ ಬಂದ ಮೇಲು ....

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ 

Nooru Janmaku Kannada Lyrics - America America Kannada Songs Lyrics..

ಚಿತ್ರ: ಅಮೇರಿಕಾ ಅಮೇರಿಕಾ
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಗಾಯಕರು: ರಾಜೇಶ್ ಕೃಷ್ಣನ್
ಸಂಗೀತ: ಮನೋ ಮೂರ್ತಿ
--------------------------------------------------------------------------

ನೂರು ಜನ್ಮಕೂ ನೂರಾರು ಜನ್ಮಕೊ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು...
ನೂರು ಜನ್ಮಕು ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು...
ನೂರು ಜನ್ಮಕೂ...

ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ...
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಓ..ಓ...ಓಆಆಆ..
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ...

ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕೂ ..

ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ ಓ..ಓ..ಓ..
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ...

ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ಹೂಹ್ಆ... 

Thraas Aakkathi Kannada Song Lyrics- Doddmane Hudga Kannada Song Lyrics

ಚಿತ್ರ: ದೊಡ್ಮನೆ  ಹುಡ್ಗ
ಸಾಹಿತ್ಯ :  ಯೋಗರಾಜ್ ಭಟ್ರು
ಗಾಯಕರು: ವಿ ಹರಿಕೃಷ್ಣ, ಇಂದು ನಾಗರಾಜ್
ಸಂಗೀತ: ವಿ ಹರಿಕೃಷ್ಣ
-----------------------------------------------------------------

ಯಾಕ್ಕೋ  ಹುಡ್ಗ  ಮೈಯಾಗೆ  ಹ್ಯಾಂಗೈತೆ
ನಾಕ್ಕೂ  ಜನುಮ  ಧಿಮಾಕು  ನಿಂಗೈತೆ

ನಂದು  ಧಾರವಾಡ ಹೆಚ್ಚಿಗಿ ಮಾತ್  ಬ್ಯಾಡ

ಮೊದ್ಲ  ಥಳಿ  ಕೆಟ್ಟೇತಿ  ಹಂಗಾನ್ ಬ್ಯಾಡ
ಇಟ್ಟಿತ  ಹುಚ್ಚು ಇಡಿಸಿದೆ  ಮಗನ
ಪೂರ್ತಿ  ಹಿಡಿಸಕ  ಆಗಲೇನ  ನಿನಗ

ಓಂಮ್ಯಾರ  ನಕ್ಕು  ಬಿಡಪ್ಪ
ಕೆನ್ನಿಯ  ಕಚ್ಚು  ಬಿಡಪ್ಪ
ಇಲ್ಲ  ತ್ರಾಸ್ ಆಕ್ಕತಿ ಜೀವಕ್ಕೆ ತ್ರಾಸ್  ಆಕ್ಕತಿ

ಯಾಕ್  ಆಕ್ಕತಿ ತ್ರಾಸ್ ಯಾಕ್  ಆಕ್ಕತಿ

ಯಾಕ ಹುಡುಗಿ  ಮೈಯಾಗೆ  ಹ್ಯಾಂಗೈತಿ
ನಾಕ್ಕೂ  ಜನುಮ  ಧಿಮಾಕು  ನಿಂಗೈತಿ

ಇಳಿ ಸಂಜೀಗಿ  ಗಂಡಸರೊಳ್ಳೆತನ
ಹೆಚ್ಚಿಗಿ  ಇರಬಾರದು
ಕೆಟ್ಟರು ಕಡುಮಿ  ಕೆಡಬಾಕು
ನಮ್ಮ  ನಾಚಿಕಿಗೆ  ಎಲ್ರಪ್ಪ  ಬೆಳಿ ಐತಿ
ಗಂಡಸಾರಗುಟ್ಟಿ  ಬಾಯಿ  ಮುಚಿಂಕೇಂಡಿರಬೇಕು

ಹರೇ ಹದಗೆಟ್ರೆ ಸುಮಸುಮಕ  ಬೇಜಾರ  ಬೇಜಾರ
ಮರೆತು  ಮೈಮುಟ್ಟು ಹೋಗ್ಲಿ  ತಗ  ಹೆಂಗಾರ  ಹೆಂಗಾರ
ಒಂದರ ಹೆಜ್ಜೆ  ಮುಂದಕ  ಇಡು ನೀ  ವಯಸ್ಸು ಮೀರಿ  ಬಿಳಿ  ದಡ್ಡಿ ಮೂಡಾರದೊಳಗ
ನಂಗಾರ  ಮೈ  ನಡುಕ  ಹೆಂಗಾರ  ಕೈ ಹಿಡಕ
ಇಲ್ಲ  ತ್ರಾಸ್ ಆಕ್ಕತಿ  ಜೀವಕ್ಕ  ತ್ರಾಸ್  ಆಕ್ಕತಿ

ಯಾಕ್  ಆಕ್ಕತಿ ತ್ರಾಸ್ ಯಾಕ್  ಆಕ್ಕತಿ

ಹಂದಿನತರ  ಕ್ವಾಲಿಟಿ ಕನಸೊಂದು ಹಿಡ್ಕಂಡೀನಿ ತಾಡದ್ದು
ಅಗದಿ  ಹತಾರ  ಬರಬ್ಯಾಡ
ನಿನ  ಅಂದದ  ಬೆಂಕಿಗೆ  ಮೈಮನಸು  ಸುತುಗೊಂಡವು ನಮ್ದು
ಇನ್ನು  ಹೆಚ್ಚಿಗಿ  ಸುಡಬೇಡಾ

ಮಳೆ  ಬಂಧಾಗ  ಬಿತ್ತುಬಾಕು  ಇಲ್ಲಿ  ಕೆಲ  ಇಲ್ಲಿ  ಕೆಲ
ತೆನೆ  ಬಂಧಾಗ  ಕಟ್ಟುಬಾಕು  ಇಲ್ಲಿ ಕೆಲ  ಇಲ್ಲಿ  ಕೆಲ
ಜೇನು  ತುಟಿಯಾಗ  ಐತಂತಾರ  ಟೆಸ್ಟು  ನೋಡಾಕ  ಹೇಳುಬೇಕನ  ನಿನಗ
ನನ್ನಲಿ ನಿನ್ನ ಕಾಳಕ್ಕ ನೀನನ್ನ  ನೀನು ಪಡಕ
ಇಲ್ಲ  ತ್ರಾಸ್  ಆಕ್ಕತಿ  ನಿಂಗು  ತ್ರಾಸ್  ಆಕ್ಕತಿ

ಬಾಳಗಾತಿ ಆಲ್ರೆಡಿ  ಬಾಳಗಾತಿ
ಯಾಕ್ಕೋ  ಹುಡ್ಗ  ಮೈಯಾಗೆ  ಹ್ಯಾಂಗೈತೆ

Kelu Krishna Kannada Song Lyrics - Rama Rama Re Movie Song Lyrics

ಚಿತ್ರ: ರಾಮ ರಾಮ ರೇ..
ಸಾಹಿತ್ಯ :  ಡಿ. ಸತ್ಯ ಪ್ರಕಾಶ್
ಗಾಯಕರು: ವಸುಖಿ  ವೈಭವ್ , ಬಿ ವಿ ಶೃಂಗ
ಸಂಗೀತ: ವಸುಖಿ  ವೈಭವ್ , ನೊಬಿನ್  ಪೌಲ್
-----------------------------------------------------------------------------------
ಕೃಷ್ಣ..ಆಆಆಆಆ...  ಓಹೋ...
ಕರುಣಾ ಸಿಂಧು ಹೌದಪ್ಪ...
ಧೀನ  ಬಂಧು..  ಅಬಾಬಾಬಾ..
ಆಪತ್  ಬಾಂಧವ ಪಾಹಿಮಾ..ಆಆಆಆಆಆ...
ಭೇಷ್...  ಮೆಚ್ಕೊಂಡುಬಿಟ್ಟೆ  ಕನ್ಲಾ

ಕೇಳು  ಕೃಷ್ಣ... ಹು  ಹೇಳ್ಳಾ ಪಾರ್ಥ..
ಕೇಳು  ಕೃಷ್ಣ, ಹೇಳು  ಪಾರ್ಥ
ಕೇಳು  ಕೃಷ್ಣ, ಹೇಳು  ಪಾರ್ಥ
ಒಳ್ಳಗೊಳ್ಳಗೆ  ಬೈಯ್ಯವಾತಾಯ...
ನಾನೀವುನಿ ಸುಮ್ನಿಲಯ್ಯ...

ಕೇಳು  ಕೃಷ್ಣ, ಹೇಳು  ಪಾರ್ಥ
ಕೇಳು  ಕೃಷ್ಣ, ಹೇಳು  ಪಾರ್ಥ
ಈ  ಕರ್ಮ ನನಗೇಕಯ್ಯ...
ಧರ್ಮನ  ಕಾಪಾಡಯ್ಯ....

ಎಲ್ಲಾರು  ನಾನೊರೆ  ಜೊತೆಗಾರರೇ
ಸಮರದಲ್ಲಿ  ಸಂಬಂಧ ಏಕೋ  ದೊರೆ
ಹೂಡು  ನೀ  ಬಾಣವ....
ಆಗದೋ  ಮಾಧವ.....

ತಡಿ  ಕೃಷ್ಣ  ನಡಿ ಪಾರ್ಥ
ತಡಿ  ಕೃಷ್ಣ  ನಡಿ ಪಾರ್ಥ.....

ಸ್ನೇಹಿತರು  ಅವರಯ್ಯ
ಮರಣವಿದು  ಅನಿವಾರ್ಯ
ಭಗವಂತ  ಕೃಪೆ  ತೊರೆಯ...

ನಿನ್  ಇಲ್ಲಿ  ಕ್ಷತ್ರಿಯ
ನೀ  ಕೂಡ  ಕ್ಷಣವಯ್ಯ
ಪಾಂಡವನೇ ಬಿಡು ಬಯಕೆಯಾ......

ಏನಂದು  ತಿಳಿತ್ತಿಲ
ಬಂಧವಿದು   ಬಿಡುತಿಲ
ಕೃಷ್ಣ ....
ಈ  ಸಾವು  ನೋವ್ಯೆಥಕ್ಕೂ...

ಸಾವಂತೆ   ನೋವಂತೆ  ಆತ್ಮಕೆ  ಏನಂತೆ
ಪ್ರತಿ ಮರಣ  ಹೊಸ ಜನನಕೋ....
ಕೊಲ್ಲುವುದೇ ಬೇಡಯ್ಯಾ ನನಗಿರಲಿ  ಅಪಜಯ.
ಸೈನಿಕನು  ನೀನಯ್ಯಾ  ಕರ್ತವ್ಯ  ಮರತೆಯಾ.......

ನನಗ್ಯಾಕೆ  ಬೇಕಯ್ಯಾ  ಈ  ರಾಜ್ಯ  ವೈಭೋಗ
ವೈರಾಗಿ  ನೀನಾದ್ರೆ  ಏನಯ್ಯ ಉಪಯೋಗ
ನರಕದಂತೆ ಕಾಣ್ತಾಯತೇ ನಾ ನಿಂತ ಜಗವೆಲ್ಲ..
ಜಗವೆಲ್ಲ  ನನ್ನಲ್ಲೇ  ಆ  ಭಯವು  ಬೇಕಿಲ್ಲ
ಬರಲಾರೆ  ನಾನು  ದಯೆತೋರು  ಪ್ರಭುವೇ  ಇರಲಾರೆ  ನಾನು
ಶರಣಾಗು  ನೀನು  ಬಿಡು  ಬೇರೆ  ಎಲ್ಲವನು
ಶರಣಾಗು  ನೀನೂಉಉಉಉ..

ಕೃಷ್ಣಆಆಆ.... ಕೃಷ್ಣಆಆಆಆ...
ಕೃಷ್ಣ  ಕೃಷ್ಣ 

Summane Summane Kannada Song Lyrics - Jothe Jotheyali Kannada Song Lyrics

ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ : ವಿ ನಾಗೇಂದ್ರ ಪ್ರಸಾದ್
ಗಾಯಕರು: ಬಾಂಬೆ ಜಯಶ್ರೀ
ಸಂಗೀತ: ವಿ ಹರಿಕೃಷ್ಣ್ನ
----------------------------------------------------------------------------------

ಸುಮ್ಮನೆ  ಸುಮ್ಮನೆ  ಇದ್ದರು  ಸುಮ್ಮನೆ
ಪ್ರಾಣ  ತಿಂತಾನೆ,  ಪ್ರೀತಿಲೇ  ಗೆಲ್ತಾನೆ,
ನಖಾರ  ನಖಾರ  ಶಾನೆ  ನಖಾರ  ನಂಗು  ಇಷ್ಟಾನೇ
ನಾನು  ಸೀರೆ  ನೆರಿಗೆ  ಹಾಕುವ  ಘಳಿಗೆ  ಬರ್ತಾನೆ  ಬಳಿಗೆ , ಆಮೇಲೆ  ಅಮ್ಮಮ್ಮ
ಯಾವ  ಸೀಮೆ  ಹುಡುಗ  ತುಂಟಾಟ  ಮಾಡದೆ  ನಿದ್ದೇನೆ  ಬರದೇ  ಅಬ್ಬಬ್ಬಬ್ಬಬ್ಬಬ್ಬಆ

ಸುಮ್ಮನೆ  ಸುಮ್ಮನೆ  ಇದ್ದರು  ಸುಮ್ಮನೆ
ಪ್ರಾಣ  ತಿಂತಾನೆ,  ಪ್ರೀತಿಲೇ  ಗೆಲ್ತಾನೆ.

ಅಂಗಾಳಿಗು  ಅಂಗೈಯಿಗೂ  ಗೋರಂಟಿಯ  ಹಾಕುವ
ಯಾಮಾರಿಸಿ  ಕೈ  ಸೋಕಿಸಿ  ಕಳ್ಳಾಟವ  ಆಡುವ .. ಆ... ಓ
ನಿನ್ನ  ಕಣ್ಣಲಿ  ಧೂಳು  ಇದೆ  ಎಂದು  ನೆಪ  ಹೇಳುತಾಆಆ,
ನನ್ನ  ಕಣ್ಣಲಿ  ಕಣ್ಣಿಟ್ಟನೋ  ತುಟಿಯಂಚನ್ನು  ತಾಕುತಾ
ನಾನು  ನೋವು  ಅಂದರೆ  ಕಣ್ಣೀರು  ಹಾಕುವ, ನೋವೆಲ್ಲಾ  ನೂಕುವ, ಧೈರ್ಯನ  ಹೇಳುವ
ಮಾತು  ಮಾತು  ಸರಸ  ಒಂಚೂರು  ವಿರಸ  ಇಲ್ಲದ  ಅರಸ  ಆಳ್ತಾನೆ  ಮನಸ ..........

ಸುಮ್ಮನೆ  ಸುಮ್ಮನೆ  ಇದ್ದರು  ಸುಮ್ಮನೆ
ಪ್ರಾಣ  ತಿಂತಾನೆ,  ಪ್ರೀತಿಲೇ  ಗೆಲ್ತಾನೆ.

ಮುಂಜಾನೆಯ  ಮೊಗ್ಗೆಲ್ಲಾವ  ಸೂರ್ಯನೇ  ಹೂ  ಮಾಡುವ
ಈ  ಹುಡುಗಿಯ  ಹೆಣ್ಣಾಗಿಸೋ  ಜಾದೂಗಾರ  ಇವ
ಮುಸ್ಸಂಜೆಯ  ದೀಪ  ಇವ  ಮನೆ  ಮನ  ಬೆಳಗುವ
ಸದ್ದಿಲ್ಲದ  ಗುಡುಗು  ಇವ  ನನ್ನೊಳಗೆ  ಮಳೆಯಾಗುವ
ಪ್ರೀತಿ  ಅಂದ್ರೆ  ನಂಬಿಕೆ  ಹೃದಯಾನೇ   ಕಾಣಿಕೆ  ಅನ್ನೋದು  ವಾಡಿಕೆ  ಅದಕಿವನೇ  ಹೋಲಿಕೆ
ಏಳು  ಏಳು  ಜನುಮ  ಇವನಿಂದನೆಯಮ್ಮ  ಆಗುತ  ಬಾಳಮ್ಮ  ಅಂದೋನ್ನು ಆ  ಬ್ರಹ್ಮ .....

ಸುಮ್ಮನೆ  ಸುಮ್ಮನೆ  ಇದ್ದರು  ಸುಮ್ಮನೆ
ಪ್ರಾಣ  ತಿಂತಾನೆ,  ಪ್ರೀತಿಲೇ  ಗೆಲ್ತಾನೆ.

Keli premigale obbalu sundari eddalu kannada song lyrics | yugapurusha kannada movie song lyrics

 ಚಿತ್ರ : ಯುಗ ಪುರುಷ ಸಾಹಿತ್ಯ : ಹಂಸಲೇಖ  ಗಾಯಕರು:  ಎಸ್. ಪಿ. ಬಾಲಸುಬ್ರಹ್ಮಣ್ಯಂ, ಲತಾ, ಹಂಸಲೇಖ  ಸಂಗೀತ:  ಹಂಸಲೇಖ  ಕೃಪೆ : ಲಹರಿ ಮ್ಯೂಸಿಕ್ ಪ್ರೀತಿ ಕೊಂದ ಕೊಲೆಗಾ...